Friday, October 17, 2008

ಹೊರಟು ಹೋಗುತ್ತೇನೆ.......

ಹೊರಟು ಹೋಗುತ್ತೇನೆ, ಭುವಿಗೆ ಬಿಸಿ ತಟ್ಟುವ ಮೊದಲೇ
ಒರಟು ಮೈ ಹೊತ್ತು, ಮನವನ್ನೂ ಒರಟು ಮಾಡಿ ಕೊಂಡು
ಹೆಜ್ಜೆಯಿಡುವೆಡೆ ಮುಳ್ಳು ಚುಚ್ಚೀತೆಂಬ ಭಯವಿಲ್ಲ; ಚುಚ್ಚಿಯಾಗಿದೆಯಲ್ಲ.
ಬಿರುಗಾಳಿ ಬಿಸಿಲಿಗಂಜಿಕೆಯಿಲ್ಲ;
ಅವುಗಳಲ್ಲೇ ಸಿಕ್ಕು ಬಿದ್ದಿರುವೆನಲ್ಲ.
ಆದರೂ ನಿರಾಶವಾದಿಯಾಗಿಲ್ಲ
ಸಾಗುತಿರುವೆನು ಮತ್ತೊಂದು ಒಲವ ಸುರಿವ
ತೀರದೆಡೆಗೆ. . .

No comments: