Friday, October 17, 2008

ಹೊರಟು ಹೋಗುತ್ತೇನೆ.......

ಹೊರಟು ಹೋಗುತ್ತೇನೆ, ಭುವಿಗೆ ಬಿಸಿ ತಟ್ಟುವ ಮೊದಲೇ
ಒರಟು ಮೈ ಹೊತ್ತು, ಮನವನ್ನೂ ಒರಟು ಮಾಡಿ ಕೊಂಡು
ಹೆಜ್ಜೆಯಿಡುವೆಡೆ ಮುಳ್ಳು ಚುಚ್ಚೀತೆಂಬ ಭಯವಿಲ್ಲ; ಚುಚ್ಚಿಯಾಗಿದೆಯಲ್ಲ.
ಬಿರುಗಾಳಿ ಬಿಸಿಲಿಗಂಜಿಕೆಯಿಲ್ಲ;
ಅವುಗಳಲ್ಲೇ ಸಿಕ್ಕು ಬಿದ್ದಿರುವೆನಲ್ಲ.
ಆದರೂ ನಿರಾಶವಾದಿಯಾಗಿಲ್ಲ
ಸಾಗುತಿರುವೆನು ಮತ್ತೊಂದು ಒಲವ ಸುರಿವ
ತೀರದೆಡೆಗೆ. . .

Saturday, September 27, 2008

ನೀನಿಲ್ಲದ ಬಾಳು

ನೀನಿಲ್ಲದ ಬಾಳು,
ನೀನಿಲ್ಲದ ಬಾಳು,
.
.
.
ಅದೇಕೋ ಪಾಳು, ಪಾಳು.

Friday, September 26, 2008

ಓಹ್! ಇನ್ನೆಲ್ಲಿಯ ....

ನಾ ಇದ್ದೆ,
ನೀನೂ ಇದ್ದೆ,
ನಮ್ಮಿಬ್ಬರಿಗೂ ನಿದ್ದೆ.

ನಾ ಎದ್ದೆ,
ನೀನೂ ಎದ್ದೆ,
ಓಹ್!
ಇನ್ನೆಲ್ಲಿಯ ನಿದ್ದೆ?!